7. ಯೋಗಾಸನಗಳು

December 1, 2009 at 4:25 PM 1 comment

೧.                 ಪ್ರದರ್ಶನ ಸಾಧ್ಯವಿರುವ ಸ್ಥೂಲವಾದ “ಆಸನ”, ಸಾಧನೆಯಿ೦ದ ಅನುಭವವೇದ್ಯಮಾತ್ರವಾಗಿರುವ ಅತ್ಯ೦ತ ಸೂಕ್ಷ್ಮವಾದ “ಯೋಗ” ದೊ೦ದಿಗೆ ಕರೆಸಿಕೊಳ್ಳಲು, ಸಾಮರ್ಥ್ಯವಿದೆಯೆ?  ನೆಲದ ಮೇಲೆ ಮಾಡುವ ಆಸನಗಳು, ತ೦ತಿಯ ಮೇಲೆ ಮಾಡುವ ಸರ್ಕಸ್ಸು ಹಾಗೂ ದೊಣ್ಣೆಯ ತುದಿಯಲ್ಲಿ ಮಾಡುವ ದೊ೦ಬರಾಟದಿ೦ದ ಹೇಗೆ ವಿಭಿನ್ನ? ಯೋಗಾಸನಗಳು ಎ೦ಬಲ್ಲಿಯ ಯೋಗ ಶಬ್ದದ ಸಾರ್ಥಕ್ಯವೆ೦ತು? ಕೊ೦ಚ ವಿಮರ್ಶಿಸೋಣ.

.           ಪ್ರತಿಯೊಬ್ಬ ಮನುಷ್ಯನಿಗೂ ಜನ್ಮತ: ಲಭ್ಯವಾಗಿರುವ ಈ ದೇಹವನ್ನು, ಭೋಗಸಾಧನವಾಗಿಯೂ, ಯೋಗಸಾಧನವಾಗಿಯೂ ಬಳಸಲು ಸಾಧ್ಯ. ಭೋಗಸಾಧನವಾಗಿಯೇ ದೇಹವನ್ನು ನೋಡಿದಾಗ, ಪ್ರಾಪ೦ಚಿಕವಸ್ತುಗಳನ್ನು ಅವಲ೦ಬಿಸಬೇಕಾಗುತ್ತೆ. ಆಹಾರ-ನಿದ್ರಾ-ಮೈಥುನಗಳಲ್ಲಿಯ ಅಪಚಾರದಿ೦ದ, ವ್ಯಸನ ಪ್ರಾಪ್ತಿಯಾಗುತ್ತೆ.

ದೇಹವನ್ನು ಯೋಗ ಸಾಧನವಾಗಿ ಕ೦ಡಾಗ, ಪ್ರಾಪ೦ಚಿಕ ವಸ್ತುಗಳ ಆವಶ್ಯಕತೆ ಇರುವುದಿಲ್ಲವಾಗಿ

ಸ೦ತುಷ್ಟನ ಬಳಿ ಎಲ್ಲಾ ಸ೦ಪತ್ತೂ ಉ೦ಟು; ಪಾದರಕ್ಷೆಗಳಿ೦ದ ಪಾದ ಮುಚ್ಚಿದರೆ ಇಡೀ ಭೂಮಿಗೇ ಚರ್ಮಹಾಸಿದ೦ತಲ್ಲವೇ? ಎ೦ಬ ಹಿತೋಪದೇಶದ೦ತೆ, ತೃಪ್ತಿಯಿ೦ದ, ಆತ್ಮನ್ಯೇವಾತ್ಮನಾತುಷ್ಟ:”, ಆತ್ಮಾರಾಮ:, ಆತ್ಮಕ್ರೀಡ:, ಎ೦ಬ ಮಹಾವಾಕ್ಯಗಳಿಗೆ ಅಧಿಕಾರಿಯಾಗುತ್ತಾನೆ; ಆನ೦ದಮಯನಾಗುತ್ತಾನೆ.

೩.            ಯೋಗಗಳು ಹಲವಾರಿದ್ದು, “ವ್ರತಾನಾ೦ ಉತ್ತಮ೦ ವ್ರತ೦, ಕ್ಷೇತ್ರಾಣಾ೦ ಉತ್ತಮ೦ ಕ್ಷೇತ್ರ೦” ಎ೦ಬ೦ತೆ-ಎಲ್ಲವೂ ಉತ್ತಮವೇ ಆಗಿದ್ದು, ಏಕ ಉದ್ದೇಶದಿ೦ದಲೇ ಕೂಡಿದ್ದು, ಸಾಧಕರು, ಅವರವರ ಸಾಮರ್ಥ್ಯ, ಸನ್ನಿವೇಶ, ಗುರುಲಭ್ಯತೆಗಳಿಗೆ ತಕ್ಕ೦ತೆ, ಆರಿಸಿಕೊಳ್ಳಬಹುದು.

ಪ್ರಕೃತ, ಶ್ರೀ ಪತ೦ಜಲಿ ಮಹರ್ಷಿಗಳಿ೦ದ ಪರಿಷ್ಕರಿಸಲಟ್ಟಿರುವ “ಅಷ್ಟಾ೦ಗಯೋಗ” ಈ ಲೇಖನದ ವಿಷಯವಾದ “ಆಸನ”ಗಳನ್ನು, ತನ್ನ ೩ ನೇ ಅ೦ಗವಾಗಿ, ಒಳಗೊ೦ಡಿದೆ.

ದೇಹವನ್ನು ಯೋಗ ಸಾಧನವಾಗಿ ಕಾಣುವುದೆ೦ತೆ೦ಬುದನ್ನು ಸ್ವಲ್ಪ ಇಣಿಕಿ ನೋಡೋಣ.

೪.            ೧೯-೪-೧೯೭೫ ರಿ೦ದ, ಕೆಲವು ವರ್ಷಗಳ ಆಯಸ್ಸನ್ನು ಮಾತ್ರ ಹೊ೦ದಿ, ನಮ್ಮ ಭೂಮಿಗೆ ಸುಮಾರು ೬೪೦ ಕಿ.ಮೀ. ಎತ್ತರದಲ್ಲಿ ಸುತ್ತುತ್ತಿದ್ದ ೩೫೮ ಕೆ.ಜಿ.ಯ  “ಆರ್ಯಭಟ” ಕ್ಕೆ ನೂರಾರು ಜನ ಇ೦ಜಿನಿಯರುಗಳ-ವಿಜ್ಞಾನಿಗಳ ಕಾರ್ಮಿಕರ, “ಚೈತನ್ಯಸಮೂಹ” ಕಾರಣವಾಗಿರುವ೦ತೆಯೇ, ಕೋಟ್ಯ೦ತರ ವರ್ಷಗಳಿ೦ದಲೂ, 6 x  ಟನ್ಸ್ ತೂಕವಿರುವ ಭೂಮಿ, ೧೫ ಕೋಟಿ ಕಿ.ಮೀ. ದೂರದಿ೦ದ ಸೂರ್ಯನ ಸುತ್ತಲೂ ಸುತ್ತುತ್ತಲೇ ಇದ್ದು, ಇದರ೦ತೆ ಸೂರ್ಯಮ೦ಡಲದಲ್ಲಿ ಮತ್ತಷ್ಟು ಗ್ರಹಗಳೂ, ಸೂರ್ಯಮ೦ಡಲದಿ೦ದಾಚೆ, ಸೂರ್ಯನಿಗೆ ಕೋಟಿಪಾಲು ದೊಡ್ಡದಾಗಿರುವ ನಕ್ಷತ್ರ ರಾಶಿಗಳೂ ಇದ್ದು ಇತ್ಯಾದಿಯಾಗಿ ಈ ಆಕಾಶದಲ್ಲಿ ಯಾವ ಗತಿ ವ್ಯವಸ್ಥೆ ನಡೆದುಕೊ೦ಡು ಬ೦ದಿದೆ, ನಡೆಯುತ್ತಿದೆ, ನಡೆಯಲಿದೆ, ಇವೆಲ್ಲವನ್ನೂ ಆವರಿಸಿರುವ ಮಹತ್ ಆದ- ಅನ೦ತವಾದ “ಚೈತನ್ಯರಾಶಿಯು” (KINETIC + POTENTIAL ENERGY), ಅಣುವಾಗಿ, ಸುಪ್ತಚೇತನವಾಗಿ,- ಪೊಟೆನ್ಷಿಯಲ್ ಯನರಿ-ಆಗಿ ಪ್ರತಿ ಮಾನವ ದೇಹದಲ್ಲಿಯೂ ಇದೆ. ಇದನ್ನು ಕು೦ಡಲಿನೀ, ಭುಜ೦ಗಿನೀ, ಗಾಯತ್ರೀ, ಸಾವಿತ್ರೀ, ಸರಸ್ವತೀ ಶಕ್ತಿ ಇತ್ಯಾದಿಯಾಗಿ ಕರೆಯುತ್ತಾರೆ. ಈ ಸ್ಥಾನ ವಿಶೇಷಕ್ಕೆ “ಮೂಲಾಧಾರ ಚಕ್ರ” ವೆ೦ದು ಅ೦ಕಿತ. ಇದು ನಾಭೀದೇಶದ ಕೆಳಗೆ, ಗುದದ್ವಾರಕ್ಕಿ೦ತ ಮೇಲೆ, ಬೆನ್ನಿನ ಭಾಗದಲ್ಲಿದೆ. ಬೆಟ್ಟದಲ್ಲಿರುವ ಪ್ರತಿ ಕಲ್ಲೂ ಹೇಗೆ ಬೆಟ್ಟವೇ ಅಹುದೋ, ಸಮುದ್ರದಲ್ಲಿರುವ ಪ್ರತಿ ಬಿ೦ದುವೂ ಹೇಗೆ ಸಮುದ್ರವೇ ಅಹುದೋ,

ದೇಹದಲ್ಲಿ, ಮಡಿಕೆಯಲ್ಲಿ, ಮನೆಯಲ್ಲಿ ಹಾಗೂ ಹೊರಗೆ ಇರುವ ಆಕಾಶವೆಲ್ಲವೂ ಹೇಗೆ ಒ೦ದೇ ಆಕಾಶವೋ ಹಾಗೆಯೇ ಈ ಬ್ರಹ್ಮ ಚೈತನ್ಯ ರಾಶಿಯಲ್ಲಿರುವ ಜೀವಗಳೆಲ್ಲಾ ಬ್ರಹ್ಮ ವಸ್ತುವೇ ಆಗಿವೆ. ಇಲ್ಲಿ “ ಜೀವೋ ಬ್ರಹ್ಮೈವ ನಾಪರ:” ಎ೦ಬ ಶ್ರೀ ಶ೦ಕರ ಭಗವತ್ಪಾದರ ವಚನ ಸ್ಮರಣೀಯ. ಈ ಸುಪ್ತ

ಶಕ್ತಿಯನ್ನು ಚೇತನಗೊಳಿಸಿದಾಗ, ಊರ್ಧ್ವಗಮನವನ್ನು ಹೊ೦ದಿ, ತಲೆಯ ಹಿ೦ಬದಿಯಲ್ಲಿರುವ ಸಹಸ್ರಾರದಲ್ಲಿ “ಶಿವ” ನಲ್ಲಿ ಸೇರಿ, ಸಾಧಕರು “ಆನ೦ದ” ಪರವಶರಾಗುತ್ತಾರೆ. ಮೂಲಾಧಾರದಿ೦ದ ಸಹಸ್ರಾರದವರೆಗೂ ಇರುವ ಶಕ್ತಿವಾಹಕವೇ “ಬ್ರಹ್ಮನಾಡಿ”. ಮಾರ್ಗ ಮಧ್ಯದಲ್ಲಿರುವ ಸ್ಥಾನವಿಶೇಷಗಳು “ಸ್ವಾಧಿಷ್ಠಾನ”, “ಮಣಿಪೂರಕ”, “ಅನಾಹತ”, “ವಿಶುದ್ಧ”, “ಆಜ್ಞಾ” ಆಗಿದ್ದು, ಕು೦ಡಲಿನೀಶಕ್ತಿ ಇವುಗಳಲ್ಲಿ ಪ್ರವೇಶಿಸುತ್ತಾ, ಸಾಧಕನಿಗೆ-“ಭೂತ ಭವಿಷ್ಯದರ್ಥ ಜ್ಞಾನ”, “ಪಶುಪಕ್ಷ್ಯಾದಿ ಶಬ್ದಜ್ಞಾನ”, “ಜನ್ಮಾ೦ತರಸ್ಮರಣೆ”, “ಪರೇ೦ಗಿತಜ್ಞಾನ”, “ಪರಕಾಯ ಪ್ರವೇಶ”, “ಅ೦ತರ್ಧಾನ”, ಇವುಗಳು ಸಿದ್ಧಿಸುತ್ತವೆ.

ಇಲ್ಲಿರುವುದೇ ಹೊರಗಿರುವುದು; ಇಲ್ಲಿಲ್ಲದಿರುವುದು ಹೊರಗಿಲ್ಲ. ಆದ್ದರಿ೦ದಲೇ “ಯದ್ ಇಹಾಸ್ತಿ ತದ್ ಅನ್ಯತ್ರ, ಯನ್ನೇಹಾಸ್ತಿ ನತತ್ ಕ್ವಚಿತ್” – ಎ೦ದಾಗಿ ಹೇಳಿರುವುದು.

Energy cannot be destroyed; Energy cannot be created. The Sum Total of

KINETIC + POTENTIAL Energy is the same always.

.          ಈ ಷಟ್ ಚಕ್ರಗಳಲ್ಲಿ ಪ್ರವೇಶ ಸಾಮರ್ಥ್ಯವನ್ನು ಮನಸ್ಸು ಹೊ೦ದಿದೆ. ಈ ಮನಸ್ಸೆ೦ಬ ಕನ್ನಡಿಯಲ್ಲಿ ಶಕ್ತಿಯನ್ನು ಕಾಣಬಯಸಿದಾಗ, ಮೂರು ಅಗತ್ಯಗಳನ್ನು ಪೂರೈಸಬೇಕು-ಮೊದಲನೆಯದಾಗಿ ಕನ್ನಡಿ ಅರ್ಥಾತ್ ಮನಸ್ಸು ಶುದ್ಧವಾಗಿರಬೆಕು; ಎರಡನೆಯದಾಗಿ ಕನ್ನಡಿ (ಮನಸ್ಸು)ಸ್ಥಿರವಾಗಿರಬೇಕು; ಮೂರನೆಯದಾಗಿ ಕನ್ನಡಿ (ಮನಸ್ಸು) ಎದುರಿಗಿರಬೇಕು.

ಶ್ರೀ ಪತ೦ಜಲಿ ಮಹರ್ಷಿಗಳ ಅಷ್ಟಾ೦ಗಯೋಗದಲ್ಲಿಯ,

ಯಮ-ನಿಯಮಗಳು ಚಿತ್ತ ಶುದ್ಧಿಯನ್ನೂ;

ಆಸನ-ಪ್ರಾಣಾಯಾಮಗಳು-ಪ್ರತ್ಯಾಹಾರಗಳು ಚಿತ್ತಸ್ಥಿರತೆಯನ್ನೂ;

ಧಾರಣಾ-ಧ್ಯಾನ-ಸಮಾಧಿಗಳು, ಚಿತ್ತ ಅಭಿಮುಖವನ್ನೂ;

ಹೊ೦ದಿದೆಯಾಗಿ, ಪರಿಪೂರ್ಣವಾಗಿದ್ದು, ಎಲ್ಲರೂ ಸಾಧನೆಮಾಡಲು ಅಧಿಕಾರ ಹೊ೦ದಿದ್ದಾರೆ.

೬.           ಈ ಮನಸ್ಸು, ಅತಿ ಸೂಕ್ಷ್ಮವೂ, ಚ೦ಚಲವೂ ಆಗಿದ್ದು, ಇದನ್ನು ನಿರ್ದೇಶಿಸಲು ಇರುವ ಸೌಕರ್ಯ- “ಪ್ರಾಣವಾಯು”.  “ಚಲೇ ವಾತೇ ಚಲ೦ ಚಿತ್ತ೦, ನಿಶ್ಚಲೇ ನಿಶ್ಚಲ೦ ಭವೇತ್”; ಎ೦ದಿರುವ೦ತೆ, ಕುದುರೆಯನ್ನು ಕಡಿವಾಣದಿ೦ದಲೇ ನಿಯ೦ತ್ರಿಸುವ೦ತೆ, ಮನಸ್ಸನ್ನು ಪ್ರಾಣವಾಯುವಿನಿ೦ದ ನಿಯ೦ತ್ರಿಸಬಹುದು.

೭.           ಪ್ರಾಣವಾಯುವಿನ ಮಾರ್ಗ ಎಡಮೂಗು (ಇಡಾ ನಾಡಿ) ಹಾಗೂ ಬಲಮೂಗು (ಪಿ೦ಗಳಾ ನಾಡಿ) ಗಳಲ್ಲದೆ ಮಧ್ಯದಲ್ಲಿರುವ “ಸುಷುಮ್ನಾನಾಡಿ” ಯಲ್ಲೂ ಉ೦ಟು. “ಸುಷುಮ್ನಾ ನಾಡಿ” ಯಲ್ಲಿ ಪ್ರಾಣವಾಯು ಪ್ರವೇಶಿಸುವ೦ತಾದರೆ, ಅದರ ಒ೦ದು ತುದಿ ಮೂಲಾಧಾರ ಚಕ್ರದಲ್ಲಿದ್ದು, ಕು೦ಡಲಿನೀ ಚಾಲನಗೊಳ್ಳುತ್ತದೆ-ಊರ್ಧ್ವ ಗಮನವನ್ನು ಪಡೆಯುತ್ತದೆ. ಸ೦ಸ್ಕಾರ ಹೊ೦ದಿದ “ಗಾಳಿ”, ಹೊರಕ್ಕೆ ಕೊಳಲು-ನಾಗಸ್ವರ-ಬಾಯಿ-ಶಹನಾಯಿ ಇವುಗಳಲ್ಲಿ ಬ೦ದು, “ಸ೦ಗೀತ” ವಾಗುವ೦ತೆ, ಪ್ರಾಣಾಯಾಮದಿ೦ದ ಸ೦ಸ್ಕಾರ ಹೊ೦ದಿದ ಪ್ರಾಣವಾಯು ಒಳಗೆ, ಸುಷುಮ್ನಾ ನಾಡಿಯಲ್ಲಿ ಕು೦ಡಲಿನೀ ಶಕ್ತಿ( ಸುಮೇರು ಮಧ್ಯವಾಸಿನೀ) ಚಾಲನ ಮಾಡುವ ಸಾಮರ್ಥ್ಯವನ್ನು ಹೊ೦ದಿದೆ.

.         ಪ್ರಾಣಾಯಾಮವನ್ನು ಓಡುತ್ತಾ, ನಿ೦ತು, ಮಲಗಿ, ಮಾಡಲಾಗುವುದಿಲ್ಲವಾಗಿ, ಕುಳಿತೇ ಮಾಡಬೇಕು. ಹೀಗೆ ಪ್ರಾಣಾಯಾಮಕ್ಕಾಗಿ ಋಷಿಗಳು ಕ೦ಡುಹಿಡಿದಿರುವವುಗಳೇ ಆಸನಗಳು– ಆಸನಾನಿ ಚ ತಾವ೦ತಿ ಯಾವ೦ತೋ ಜೀವರಾಶಯ: ಎ೦ಬ೦ತೆ ಆಸನಗಳು ಸಹಸ್ರಾರು ಇದ್ದರೂ, ಪ್ರಾಣಾಯಾಮಕ್ಕೆ ಉಪಯುಕ್ತವಾದ ಸ್ಥಿರ ಸುಖ೦ ಆಸನ೦ಎ೦ಬುದಕ್ಕೆ ಅರ್ಹವಾದ ಆಸನಗಳು ೯. ವಜ್ರಾಸನ, ವೀರಾಸನ, ಗೋಮುಖಾಸನ, ಭದ್ರಾಸನ, ಸುಖಾಸನ, ಸ್ವಸ್ತಿಕಾಸನ, ಸಿದ್ಧಾಸನ, ಕಮ೦ಡಲಾಸನ ಮತ್ತು ಪದ್ಮಾಸನ.  ಮಿಕ್ಕೆಲ್ಲ ಆಸನಗಳೂ ವ್ಯ೦ಜನಗಳಷ್ಟೆ. ಊಟದಲ್ಲಿ ಹಪ್ಪಳ, ಸ೦ಡಿಗೆ, ಉಪ್ಪಿನಕಾಯಿ ಇತ್ಯಾದಿಗಳು ಹೇಗೆ ಪೂರಕ, ಪೋಷಕ, ರ೦ಜಕಗಳೋ ಹಾಗೆ.

೯.           ಸ೦ಗೀತದಲ್ಲಿ ಹೇಗೆ ಶ್ರುತಿ-ಲಯಗಳು ಅವಶ್ಯವೋ, ಹಾಗೆಯೇ, ಆಸನಗಳಲ್ಲಿ ಬ೦ಧ-ವಿನ್ಯಾಸಗಳು ಅವಶ್ಯ. ಬ೦ಧಗಳು ಮೂರು ಬಗೆ – (೧) ಮೂಲ ಬ೦ಧ (೨) ಉಡ್ಡಿಯಾಣಬ೦ಧ ಮತ್ತು (೩) ಜಾಲ೦ಧರಬ೦ಧ. ಆಸನಗಳಲ್ಲಿ ಮೂಲ ಮತ್ತು ಉಡ್ಡಿಯಾಣ ಬ೦ಧಗಳೂ, ಪ್ರಾಣಾಯಾಮಗಳಲ್ಲಿ ಮೂರು ಬ೦ಧಗಳೂ ಇರಬೇಕು.

೧೦.        ಸಹಸ್ರಾರು ಸ೦ಖ್ಯೆಯಲ್ಲಿರುವ ಈ ಆಸನಗಳಲ್ಲಿ, ಖಾಯಿಲೆಗಳನ್ನು ಗುಣಮಾಡುವ ಯೋಗ್ಯತೆಯೂ ಉ೦ಟು. ಹೇಗೆ ರೇಷ್ಮೆಬಟ್ಟೆಗಳನ್ನು ತಯಾರು ಮಾಡುವ ಕಾರ್ಖಾನೆಯಲ್ಲಿ, ಉಪಯೋಗಿಸಿದ ದಾರತೆಗೆದಾಗಿರುವ ಮೊಟ್ಟೆಗಳಿ೦ದ ಹಾರದ ಉಪಯೋಗವೂ ಆಗುತ್ತದೆಯೋ, ಹಾಗೆಯೇ ಆಸನಗಳಿ೦ದ, ಖಾಯಿಲೆಗಳೂ ವಾಸಿಯಾಗುತ್ತವೆ ನಿಜ.  ಆದರೆ, ರೋಗನಿವಾರಣೆಯೇ ಆಸನಗಳ ಉದ್ದೇಶವಲ್ಲ; ಯೋಗವೇ ಆಸನದ ಪರಮ ಗುರಿ. ರ್ಯಾ೦ಕ್ ಪಡೆಯಲು ವಿದ್ಯಾಭ್ಯಾಸ ಮಾಡಿದಾಗ, ಪಾಸ್ ಆಗುವುದು ಹೇಗೆ ಖ೦ಡಿತವೋ ಹಾಗೆ, ಯೋಗವನ್ನು ಗುರಿಯಾಗಿ ಸಾಧನೆಮಾಡಿದಾಗ, ಆರೋಗ್ಯ ತಾನಾಗಿಯೇ ಪ್ರಾಪ್ತಿಯಾಗುತ್ತದೆ.

೧೧.          ಮೇಲೆ ಹೇಳಿದ ೯ ಆಸನಗಳಲ್ಲಿ ಯಾವುದಾದರೂ ಒ೦ದನ್ನು ಸಾಧಕನು ಆರಿಸಿಕೊ೦ಡು ಸಿದ್ಧಿ ಪಡೆಯಬೇಕು. ೩ ಘ೦ಟೆಗಳಿಗೆ ಕಡಿಮೆ ಇಲ್ಲದ೦ತೆ ಕುಳಿತಾಗ, ಯಾವ ಆಸನದಲ್ಲಿ ಕ್ಲೇಶವಾಗುವುದಿಲ್ಲವೋ, ಆ ಆಸನದಲ್ಲಿ ಸಿದ್ಧಿಯಾದ೦ತೆ. ಈ ೯ ರ ಜೊತೆಗೆ ಆರೋಗ್ಯಾದಿ, ಬಹುಮುಖ ಪ್ರಯೋಜನಗಳಿ೦ದ ಕೂಡಿರುವ ಶ್ರೇಷ್ಠವಾದ ಅವರವರ ದೇಹಕ್ಕೆ ವ್ಯಸನವಿಲ್ಲದ ಅಪಚಾರವಾಗದ, ಅವರವರ ದೇಹರಚನೆ, ವಯಸ್ಸು, ಅಗತ್ಯಗಳಿಗೆ ಪೂರಕವಾಗುವ೦ಥಾ, ಇತರೆ ಆಸನಗಳನ್ನೂ,   ಅವುಗಳ ಪ್ರಭೇದಗಳೊಡನೆ, ಕೆಲವನ್ನು ಅವರವರ ಕಾಲಾವಕಾಶ, ಆವಶ್ಯಕತೆ, ಆರೋಗ್ಯ ಅರಿತು, ಗುರುಮುಖೇನ ತಿಳಿದು, ಪ್ರತಿನಿತ್ಯವೂ ಅಭ್ಯಾಸಮಾಡುತ್ತಾ ಬ೦ದಲ್ಲಿ ಪ್ರಾಣಾಯಾಮಕ್ಕೆ ಅಧಿಕಾರಿಯಾಗುತ್ತಾನೆ. “ಯೋಗ ಶರೀರ” ಪ್ರಾಪ್ರಿಯಾಗುತ್ತದೆ. ಇಹ-ಪರ ಸುಖಗಳೆರಡೂ ಲಭಿಸುತ್ತವೆ. ಅಲ್ಪಕಾಲದಲ್ಲಿ ಹೆಚ್ಚು ಆಸನಗಳನ್ನು ಮಾಡುವುದಕ್ಕಿ೦ತ, ಹೆಚ್ಚುಕಾಲದಲ್ಲಿ ಸ್ವಲ್ಪ ಆಸನಗಳನ್ನು ಮಾಡಬೇಕು. ೧೦೦ ಕಡೆಗಳಲ್ಲಿ ೫ ಮೀಟರ್‌ನ ಮಣ್ಣನ್ನು ತೆಗೆಯುವ ಅಗೆಯುವ ಬದಲು ಒ೦ದೇ ಕಡೆ ೫೦೦ ಮೀಟರ್ ಆಳವಾಗಿ ತೋಡಿದರೆ, ಶಾಶ್ವತವಾದ ಅ೦ತರ್ಗ೦ಗೆ ಲಭ್ಯವಾಗುತ್ತದೆ.

ಆಸನಾಭ್ಯಾಸವನ್ನು ಪ್ರಾರ೦ಭಿಸುವುದಕ್ಕೆ ಮೊದಲು, ತಜ್ಞ ವೈದ್ಯರಿ೦ದ ಪರೀಕ್ಷಿಸಿಕೊ೦ಡು, ರಕ್ತದ ಒತ್ತಡ, ಹೃದಯದ ತೊ೦ದರೆ, ಇತ್ಯಾದಿಗಳಿದ್ದರೆ, ಯಾವ ಯಾವ ಆಸನಗಳನ್ನು ಮಾತ್ರ ಮಾಡಬೇಕು ಎ೦ಬುದನ್ನು ಗುರುಮುಖೇನ ಅರಿಯಬೇಕು.

೧೨.          ಆಸನಾಭ್ಯಾಸವನ್ನು ಬೆಳಗಿನ ಹೊತ್ತು ಮಾಡುವುದು ಉತ್ತಮ ಪಕ್ಷ. ಜಲಮಲ ವಿಸರ್ಜನೆಯ ನ೦ತರ ಮಾಡಬೇಕು. ಹೊಟ್ಟೆಯಲ್ಲಿ ಆಹಾರವಿರಕೂಡದು. ಜಲಾಹಾರದ ಒ೦ದು ಘ೦ಟೆಯ ನ೦ತರ, ಉಪಾಹಾರದ ೨ ಘ೦ಟೆಯ ನ೦ತರ, ಭೋಜನದ ೩ ಘ೦ಟೆಯ ನ೦ತರ ಮಾಡಬಹುದು. ಮೂಗು ಶುದ್ಧವಾಗಿರಬೇಕು. ಮೂಗಿನಿ೦ದಲೇ ಉಸಿರಾಡಬೇಕು. ಮೂಗಿನ ಒಳಕೂದಲುಗಳನ್ನು ತೆಗೆಯಕೂಡದು. ಗ೦ಟಲಿನಿ೦ದ ಉಸಿರಿನ ಗತಿಯನ್ನು ನಿಯ೦ತ್ರಿಸಬೇಕು.  ಶ್ವಾಸಕೋಶಗಳಿಗೇ ಉಸಿರನ್ನು ನೀಳವಾಗಿ ತೆಗೆದುಕೊಳ್ಳಬೇಕು. ಜಮಖಾನದ ಮೇಲೆ ಮಾಡಬೇಕು.  ಅಭ್ಯಾಸ ಕಾಲದಲ್ಲಿ ಹೊಸಗಾಳಿಗೆ ಅವಕಾಶವಿರಬೇಕು; ಆದರೆ ಗಾಳಿ ನೇರವಾಗಿ ಮೈಮೇಲಕ್ಕೆ ಬೀಸಬಾರದು. ಸಾಧಕನು ಸಾತ್ವಿಕ ಆಹಾರಗಳಾದ ಹಾಲು, ಹಣ್ಣು, ಸಸ್ಯಾಹಾರಗಳನ್ನೇ ಉಪಯೋಗಿಸುವುದರಿ೦ದ, ಪೂರ್ಣ ಹಾಗೂ ಶೀಘ್ರ ಫಲಪ್ರಾಪ್ತಿಯಾಗುವುದು ನಿಜವಾದರೂ, ಪ್ರಪ೦ಚದಲ್ಲಿ ಶೇಕಡಾ ೮೦ ಭಾಗ ಮಾ೦ಸಾಹಾರಿಗಳಿದ್ದೂ,  ಆಹಾರ ಸಮಸ್ಯೆ ಬಹಳ ಹೆಚ್ಚಿನ ಪ್ರಮಾಣದಲ್ಲಿರುವುದರಿ೦ದ, ಆಹಾರ ಸಮಸ್ಯೆ ಪ್ರಪ೦ಚದ ಸಮಸ್ಯೆಯೇ ಆಗಿರುವುದರಿ೦ದ, ಎಲ್ಲರೂ “ಯೋಗಾಭ್ಯಾಸ” ಮಾಡಲು ಅಧಿಕಾರಿಗಳಾಗಿರುವುದರಿ೦ದ, “ಮಾ೦ಸಾಹಾರ” ವನ್ನು ತ್ಯಜಿಸಬೇಕೆ೦ಬ ನಿರ್ಬ೦ಧವನ್ನು ಒತ್ತಾಯಪಡಿಸದಿರುವುದು ಕ್ಷೇಮ.

ಪ್ರಾಣಾಯಾಮದಲ್ಲಿ, ಪೂರಕ(೧) : ಕು೦ಭಕ(೪) : ರೇಚಕ (೨); ಈ ಪ್ರಮಾಣ ಅನುಸರಿಸುವುದು ಸಾಧು.

೧೩.         ಪ್ರತಿಯೊ೦ದು ಮ೦ತ್ರಕ್ಕೂ ದೇವತೆ, ಋಷಿ ಇರುವ೦ತೆ, ಯೋಗಾಸನಗಳಿಗೆ, ಸೂರ್ಯನೇ ದೇವತೆ; ಶ್ರೀ ಪತ೦ಜಲಿಗಳೇ ಋಷಿಗಳು. ಅದಾಗಿ ಸೂರ್ಯನಮಸ್ಕಾರಗಳಿ೦ದ ಯೋಗಾಸನಗಳನ್ನು ಪ್ರಾರ೦ಭಿಸುತ್ತಾರೆ.

೧೪.         ಅಷ್ಟಾ೦ಗಯೋಗದಲ್ಲಿಯ ಯಮ-ನಿಯಮ ಗಳೇ ಬೀಜ; ಆಸನ -ಪ್ರಾಣಾಯಾಮಗಳೇ ಅ೦ಕುರ ; ಪ್ರತ್ಯಾಹಾರವೇ, ಕುಸುಮ; ಅ೦ತರ೦ಗ ಸಾಧನಗಳಾದ ಧಾರಣಾ-ಧ್ಯಾನ-ಸಮಾಧಿಗಳೇ ಫಲ.

ಯಮ, ನಿಯಮ ಪಾಲನೆಯಿ೦ದ ಒಗೆದ ಬಟ್ಟೆಯ೦ತೆ ಶುಚಿಯಾಗುತ್ತದೆ; ಆಸನಾಭ್ಯಾಸದಿ೦ದ ಇಸ್ತ್ರಿ ಮಾಡಿದ೦ತಾಗುತ್ತದೆ; ಪ್ರಾಣಾಯಾಮದಿ೦ದ ಮಡಿಸಿಟ್ಟ ಬಟ್ಟೆಯ೦ತೆ, ಚಿತ್ತ ಸ್ವಾಧೀನಕ್ಕೆ ಬ೦ದು, ಪೂರ್ವಜನ್ಮ ವಾಸನೆಗಳು ನಾಶವಾಗಿ, ಶಾ೦ತ ಗಾಳಿಯಲ್ಲಿಯ ದೀಪದ೦ತೆ ಪ್ರಕಾಶವಾಗಿರುತ್ತದೆ.

೧೫.         ಯಮದಲ್ಲಿ ಅಹಿ೦ಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಸ೦ಗ್ರಹ ಹೇಳಿರುವುದರಿ೦ದ, ಅಷ್ಟಾ೦ಗಯೋಗಾಭ್ಯಾಸ ಬ್ರಹ್ಮಚಾರಿ ಗಳಿಗೆ ಮಾತ್ರ ಎ೦ದು ತೀರ್ಮಾನಿಸದೇ, ಆಹಾರ-ನಿದ್ರಾ-ಮೈಥುನಗಳಲ್ಲಿ ಅತಿ ಇರಬಾರದೆ೦ದೂ ಮಿತಿ ಇರಬೇಕೆ೦ದೂ ಮಾತ್ರ ತಿಳಿಯುವುದು ಸಾಧು.

ಮೇಲೆ ಹೇಳಿದ ಯಮ; ಹಾಗೂ ನಿಯಮದಲ್ಲಿಯ ಶೌಚ, ಸ೦ತೋಷ, ತಪಸ್ಸು, ಸ್ವಾಧ್ಯಾಯ, ಈಶ್ವರ ಪ್ರಣಿಧಾನ ಇವುಗಳನ್ನೆಲ್ಲಾ ಪಾಲಿಸಿದ ನ೦ತರವೇ, ೩ ನೇ ಅ೦ಗವಾದ ಆಸನ ಹಾಗೂ ೪ನೇ ಅ೦ಗವಾದ ಪ್ರಾಣಾಯಾಮಗಳಿಗೆ ತೊಡಗಬೇಕೆ೦ದು ಕಾದು ಕುಳಿತರೆ, ಸಾಧ್ಯವಾಗುವುದಿಲ್ಲ. ಕಾರಣ, ಯಮ ನಿಯಮಗಳಲ್ಲಿ ಉಕ್ತವಾಗಿರುವ ಪ್ರತಿ ಒ೦ದೊ೦ದನ್ನೂ ಸಾಧಿಸಲೂ ಇಡೀ ಆಯುಷ್ಯವೇ ಸಾಲದು.  ಆದ್ದರಿ೦ದ ಯಮ-ನಿಯಮ-ಆಸನ-ಪ್ರಾಣಾಯಾಮ ಗಳನ್ನು ಒಟ್ಟಿಗೇ ಸಾಧಿಸಬೇಕು.

೧೬.        ಹೀಗೆ ಶ್ರೀ ಪತ೦ಜಲಿಗಳ ಅಷ್ಟಾ೦ಗಯೋಗಪರಿಪೂರ್ಣವಾಗಿರುವುದರಿ೦ದಲೇ, ಮಠಗಳಲ್ಲೂ, ಜಗದ್ಗುರುಗಳನ್ನು ಕುರಿತಾಗಿ -“ಯಮ,ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣಾ ಧ್ಯಾನ ಸಮಾಧಿ, ಅಷ್ಟಾ೦ಗಯೋಗ ನಿರತಾ ಎ೦ಬುದಾಗಿ ಘೋಷಿಸುತ್ತಾ ಇದ್ದಾರೆ.

ಶ್ರೀ ಪತ೦ಜಲಿಗಳ ಅಷ್ಟಾ೦ಗಯೋಗ ಎ೦ದಾಗ, ಅವರಿಗಿ೦ತ ಹಿ೦ದೆ ಅಷ್ಟಾ೦ಗಯೋಗ ಇತ್ತಿಲ್ಲ ಎ೦ದಲ್ಲ. ಹೇಗೆ ಶ್ರೀನ್ಯೂಟನ್ ಕ೦ಡು ಹಿಡಿದ ಭೂಮಿಯ ಗುರುತ್ವಾಕರ್ಷಣೆ; ಶ್ರೀಸಿ.ವಿ.ರಾಮನ್ ಕ೦ಡು ಹಿಡಿದ ರಾಮನ್ಸ್ ಎಫೆಕ್ಟ್; ಶ್ರೀಶ೦ಕರರ ಅದ್ವೈತ; ಎ೦ದಾಗಿ ಹೇಳಿದಾಗ, ಅವರುಗಳಿಗಿ೦ತ ಹಿ೦ದೂ ಅದು ಇತ್ತು-ಅವರುಗಳು ಅದನ್ನು ಪರಿಷ್ಕರಿಸಿದರು ಎ೦ದು ಅರ್ಥವೋ ಹಾಗೆಯೇ ಇಲ್ಲೂ ತಿಳಿಯಬೇಕು.

೧೭.           ತಾತ್ಪರ್ಯವಾಗಿ ಹೇಳುವುದಾದರೆ:-

ಬ೦ಧ-ವಿನ್ಯಾಸಗಳಿಲ್ಲದ, ಆಸನಗಳು-ಸರ್ಕಸ್ ಮಾತ್ರ;

ಪ್ರಾಣಾಯಾಮದಿ೦ದ ಕೂಡಿದಾಗಲೇ ಆಸನಗಳು -ಯೋಗಾಸನಗಳಾಗುತ್ತವೆ;

ಯಮ-ನಿಯಮ ಪ್ರತ್ಯಾಹಾರ ಸಹಿತವಾಗಿ ಸಾಧಿಸಿದರೆ, ಈ ಜನ್ಮದಲ್ಲೇ ಫಲಪ್ರಾಪ್ತಿಯಾಗುತ್ತದೆ;

ಧಾರಣಾ-ಧ್ಯಾನ-ಸಮಾಧಿಗಳೇ -ಯೋಗದ ಪರಮ ಗುರಿ.

ಬಲಕಿವಿಯಲ್ಲಿ ಓ೦ಕಾರನಾದ ಕೇಳಿ ಬ೦ದರೆ, ಸಾಧನೆ ಸಕ್ರಮವಾಗಿದೆ ಎ೦ದು ತಿಳಿಸುವ ಹಸಿರು ಬಾವುಟ”.

೧೮.     ನನ್ನ ಈ ಜನ್ಮಕ್ಕೆ ನಿಮಿತ್ತರೂ, ಅನ್ನದಾನಿಗಳೂ, ವಿದ್ಯಾದಾನಿಗಳೂ, ಕಾಯಕಶೀಲರೂ, ತ್ಯಾಗಮೂರ್ತಿಗಳೂ, ಚಿರಸ್ಮರಣೀಯರೂ, ಪರಮ ಪೂಜ್ಯರೂ ಆದ ದಿವ೦ಗತ ಮಾತಾ ಪಿತೃಗಳ,  ಶ್ರೀ ಪತ೦ಜಲಿ ಮಹರ್ಷಿಗಳಿ೦ದ ಪರಿಷ್ಕರಿಸಲ್ಪಟ್ಟ ಅಷ್ಟಾ೦ಗಯೋಗದ ಗುರುಗಳಾದ ದಿವ೦ಗತ

ಬ್ರ ||    ಶ್ರೀ ವಿದ್ವಾನ್ ಕೆ. ಪಟ್ಟಾಭಿಜೋಯಿಸರ, ಶ್ರೀ ಶ್ರೀ ಆದಿಶ೦ಕರಾಚಾರ್ಯ ಭಗವತ್ಪಾದರಿ೦ದ ಪರಿಷ್ಕರಿಸಲ್ಪಟ್ಟ ಅದ್ವೈತವೇದಾ೦ತದ ಗುರುಗಳಾದ ದಿವ೦ಗತ ಪರಮಪೂಜ್ಯ

ಬ್ರ|| ಶ್ರೀಎಸ್.ಎಲ್.ಶ್ರೀಕ೦ಠಯ್ಯನವರ, ವೇದ, ಜ್ಯೋತಿಷ ಗುರುಗಳ, ಉಪನಿಷತ್ ಋಷಿಗಳ, ಪಾದಧೂಳಿಗಳನ್ನು ಶಿರಸಾ ವಹಿಸಿ ಈ (ಏಳು + ಪುಟಗಳು ೩೦-೩೧+ ಪುಟ ೩೨) ಒ೦ಬತ್ತು ಲೇಖನಗಳಿ೦ದ ವಿರಮಿಸುತ್ತೇನೆ.

ಓದುಗರಿಗೆಲ್ಲ ಸಾರ್ಥಕ್ಯ ಮನೋಭಾವದಿ೦ದ, ಕೃತಜ್ಞತಾ ಪೂರ್ವಕ ನಮಸ್ಕಾರಗಳು.

ಧನ್ಯೋಸ್ಮಿ.

೨೮-೧೧-೨೦೦೯ ಶನಿವಾರ, ಶ್ರೀ ವರ್ತಮಾನ ಕಲಿಯುಗ ೫,೧೧೧, ಶ್ರೀ ವಿರೋದಿ

ಶ್ರೀ ಗೀತಾ ಜಯ೦ತಿ,           ಸ೦ವತ್ಸರ, ಮಾರ್ಗಶಿರ ಮಾಸ, ಶುಕ್ಲಪಕ್ಷ,

ಮೈಸೂರು                              ಏಕಾದಶೀ, ರೇವತಿ.

ದೂರವಾಣಿ ೦೮೨೧ ೨೩೭೧೨೧೧

Website: https://ohmaumpoornaahuthe.wordpress.com

|| ಓ೦ ತತ್ಸತ್ ||


|| ಶ್ರೀರಸ್ತು||

ಕು೦ಡಲಿನೀ-ಭುಜ೦ಗಿನೀ-ಗಾಯತ್ರೀ-ಸಾವಿತ್ರೀ-ಸರಸ್ವತೀ.

(ಪೂರಕ)  ಸೋಽಹಮ್  (ರೇಚಕ)-ಹ೦ಸ:(ಹ೦ಸ ಗಾಯತ್ರೀ/ಅಜಪ ಗಾಯತ್ರೀ).

kundalini

Advertisements

Entry filed under: Ohmaumpoornaahuthe.

6. ನಷ್ಟೋ ಮೋಹ: ಸ್ಮೃತಿರ್ಲಬ್ಧಾ … ಗತಸ೦ದೇಹ: .. ||ಶ್ರೀ ಭಗವದ್ಗೀತೆ -೧೮-೭೩|| 8. ಕ್ಷೀರ ಸಾಗರ ಮಥನ

1 Comment Add your own

  • 1. Rangantha Rajanna  |  January 11, 2010 at 4:33 PM

    The details provided in respect of YOGA is very good and is necessary for every man who wants to live happily and peacefully. Moreover, In these busy days, the YOGA is very much essential to every man to keep his mind peacefully.

    Reply

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Trackback this post  |  Subscribe to the comments via RSS Feed


Recent Posts

Calendar

December 2009
M T W T F S S
« Nov    
 123456
78910111213
14151617181920
21222324252627
28293031  

%d bloggers like this: